ನಿಗೂಢವಾಗಿ ಮೃತಪಟ್ಟ ಡಿವೈಎಸ್‌ಪಿ ಲಕ್ಷ್ಮೀ ಕೇಸ್‌ಗೆ ಇದೀಗ ಹೊಸ ಟ್ವಿಸ್ಟ್ ದೊರಕಿದೆ. ಏನಿದು ಹೊಸ ಟ್ವಿಸ್ಟ್..?

ಸಿಐಡಿ ಡಿವೈಎಸ್ಪಿ ವಿ.ಲಕ್ಷ್ಮೇ ಅವರ ನಿಗೂಢ ಸಾವಿನ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದು, ಅಧಿಕಾರಿ ಮೊಬೈಲ್‌ ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ.

ಬೆಂಗಳೂರಿನ ನಾಗರಾಬಾವಿಯಲ್ಲಿರುವ ಸ್ನೇಹಿತ ಮನೋಹರ್‌ ಮನೆಯಲ್ಲಿ ಪಾರ್ಟಿ ಮಾಡಿದ್ದ ಬಳಿಕ ಅಧಿಕಾರಿ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆದರೆ ಸ್ಥಳದಲ್ಲಿ ಲಕ್ಷ್ಮಿ ಅವರ ಮೊಬೈಲ್‌ ಪತ್ತೆಯಾಗಿಲ್ಲ. ಹೀಗಾಗಿ ಮೊಬೈಲ್‌ ಪತ್ತೆಗೆ ಪೊಲೀಸರು ಶೋಧ ನಡೆಸಿದ್ದು, ಮೊಬೈಲ್‌ ಒಳ ಹಾಗೂ ಹೊರ ಕರೆಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಪಾರ್ಟಿ ಮಾಡಿದ ವೇಳೆ ಡಿವೈಎಸ್ಪಿ ಲಕ್ಷ್ಮಿ ಅವರ ಜತೆಗಿದ್ದ ಮನೋಹರ್‌ ​ಅಲಿ​ಯಾ​ಸ್‌ ಮನು, ಆತನ ಸ್ನೇಹಿತ ರಾಹುಲ್‌, ಪ್ರಜ್ವಲ್‌, ರಂಜಿತ್‌ ಹಾಗೂ ಧರ್ಮೇಗೌಡ ಎಂಬುವರ ವಿಚಾರಣೆಯನ್ನು ಶುಕ್ರವಾರ ಕೂಡ ಪೊಲೀಸರು ಮುಂದುವರೆಸಿದ್ದಾರೆ.

ಸದ್ಯ ಲಕ್ಷ್ಮಿ ಅವರ ಸ್ನೇಹಿತರ ಹೇಳಿಕೆಗಳು ಗೊಂದಲದಿಂದ ಕೂಡಿವೆ. ಕೋಣನಕುಂಟೆ ಮನೆ ಮತ್ತು ಘಟನೆ ನಡೆದ ಫ್ಲಾಟ್‌, ಸುತ್ತಲ ಪ್ರದೇಶದಲ್ಲಿ ಹುಡುಕಾಟ ನಡೆಸಿದ್ದರೂ ಇಲ್ಲಿಯವರೆಗೂ ಮೊಬೈಲ್‌ ಸಿಕ್ಕಿಲ್ಲ. ಮೊಬೈಲ್‌ ಪತ್ತೆಯಾದರೆ ಸಾಕಷ್ಟುಮಾಹಿತಿ ಸಿಗಲಿದೆ. ಅಲ್ಲದೆ, ಅಧಿಕಾರಿ ಅವರ ಕುಟುಂಬಸ್ಥರು ಹಾಗೂ ಸರ್ಕಾರಿ ಕಾರು ಚಾಲಕ, ಕಚೇರಿ ಸಿಬ್ಬಂದಿಯಿಂದಲೂ ಅವರ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ. ಮೃತಪಟ್ಟದಿನ ಲಕ್ಷ್ಮಿ ಅವರು ಯಾರಾರ‍ಯರನ್ನು ಭೇಟಿಯಾಗಿದ್ದಾರೆ ಎಂಬ ಬಗ್ಗೆ ಕೂಡ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಎರಡ್ಮೂರು ದಿನಗಳಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬರಲಿದೆ. ಆ ಬಳಿಕ ಡಿವೈಎಸ್ಪಿ ಅವರದ್ದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದು ತಿಳಿಯಲಿದೆ. ತನಿಖೆ ಮುಂದುವರೆದಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಡಾ.ಸಂಜೀವ್‌ ಎಂ.ಪಾಟೀಲ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದರು. ಡಿ.16ರಂದು ಲಕ್ಷ್ಮಿ ಅವರು ಸ್ನೇಹಿತನ ಮನೆಗೆ ತೆರಳಿದ್ದರು. ನೇಣು ಬಿಗಿದ ಸ್ಥಿತಿಯಲ್ಲಿ ಲಕ್ಷ್ಮಿ ಅವರ ಮೃತ ದೇಹ ಪತ್ತೆಯಾಗಿತ್ತು. ಮೃತ ಅಧಿಕಾರಿ ತಂದೆ ನಮ್ಮ ಪುತ್ರಿ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯವರಲ್ಲ ಎಂದು ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಶ್ರೀ ಸಾಯಿಬಾಬಾ ಜ್ಯೋತಿಷ್ಯ ಫಲ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಅಂಗಡಿ ವ್ಯಾಪಾರ ಸಾಲಬಾದೆ ಬಿಜಿನೆಸ್ ಪ್ರಾಬ್ಲಮ್ ಗಂಡ-ಹೆಂಡತಿ ತೊಂದರೆ ಪ್ರೀತಿಯಲ್ಲಿ ಮೋಸ ಅತ್ತೆ-ಸೊಸೆ ಜಗಳ ಆಸ್ತಿ ವಿಷಯ ಮಕ್ಕಳ ಫಲ ಅಷ್ಟಮಂಗಳ ಪೂಜಾ ಶಕ್ತಿಯಿಂದ ನಿಮ್ಮ ಕಠಿಣ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶತಸಿದ್ಧ ಸಾಯಿನಾಥ್ 8884454504

ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 8884454504 . ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಶ್ರೀ ಪಂಡಿತ್ ಸಾಯಿನಾಥ್ ಗುರೂಜಿ 8884454504 . ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884454504

Leave a Reply

Your email address will not be published. Required fields are marked *